ಕೇವಲ ಪದವಿ ಪಡೆದರೆ ಸಾಲದು. ಇಂದಿನ ದಿನಗಳಲ್ಲಿ ಪದವಿ ಜತೆಗೆ ಉತ್ತಮ ಉದ್ಯೋಗವೂ ಅವಶ್ಯ. ವ್ಯಾಸಂಗ ಮಾಡಿದಾಕ್ಷಣ ಎಲ್ಲರಿಗೂ ತಮ್ಮ ಕನಸಿನ ಉದ್ಯೋಗ ದೊರಕುತ್ತದೆ ಎಂದೇನೂ ಹೇಳಲಾಗದು. ಉದ್ಯೋಗ ಅರಸಿ ಕಚೇರಿ, ಕಚೇರಿಗಳಿಗೆ ಅಲೆದು ಕೊನೆಗೆ ಜೀವನೋಪಾಯಕ್ಕೆ ಯಾವುದಾದರೊಂದು ವೃತ್ತಿಗೆ ಶರಣಾಗುವುದು ಸಾಮಾನ್ಯ ಸಂಗತಿಯಾಗಿದೆ. ಎಲ್ಲೋ ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ ಉದ್ಯೋಗವು ಲಭ್ಯವಾಗುತ್ತದೆ. ಇನ್ನು ಕೆಲ ಪ್ರತಿಭಾವಂತರಿಗೆ ಉದ್ಯೋಗವು ತಾನಾಗಿಯೇ ಅರಸಿ ಬರುತ್ತದೆ.
 ಎಲ್ಲರೂ ಬುದ್ಧಿವಂತರು ಏನಲ್ಲ. ಕೆಲವರ ಪ್ರತಿಭೆಗೆ ತಕ್ಕ ಉದ್ಯೋಗ ನಿಶ್ಚಿತ. ಆದರೆ ಕೆಲ ನಿರುದ್ಯೋಗಿಗಳಿಗೆ ಉದ್ಯೋಗ ಪಡೆಯುವ ನಿಟ್ಟಿನಲ್ಲಿ ತರಬೇತಿ, ಮಾರ್ಗದರ್ಶನವೂ ಅಗತ್ಯ. ಅಂತೆಯೇ ನಿರುದ್ಯೋಗಿಗಳ ಪ್ರತಿಭೆಗೆ ಸೂಕ್ತ ರೀತಿಯಲ್ಲಿ ಸಾಣೆ ಹಿಡಿಯುವ ಕೆಲಸವನ್ನು ಅತ್ಯಂತ ಕರಾರುವಾಕ್ಕಾಗಿ ಮಾಡುವ ನಿಟ್ಟಿನಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ನಗರದ ಹೆಬ್ಬಾಳು ಕೈಗಾರಿಕಾ ಬಡಾವಣೆ ಪ್ರದೇಶದಲ್ಲಿ ಐಕ್ವೆಸ್ಟ್ ಇದೀಗ ಉದಯಿಸಿದೆ. ಎಂಜಿನಿಯರಿಂಗ್ ಮತ್ತಿತರ ಪದವೀಧರರಿಗೆ ಉದ್ಯೋಗ ಲಭ್ಯತೆಗಾಗಿ ಕೌಶಲ್ಯ ತರಬೇತಿ, ಮಾರ್ಗದರ್ಶನ ನೀಡಲು ಸಂಸ್ಥೆಯು ಇದೀಗ ಮುಂದಾಗಿದೆ. ಉದ್ಯೋಗ ಆಕಾಂಕ್ಷಿಗಳ ಕನಸನ್ನು ನನಸು ಮಾಡಲು ಸಂಸ್ಥೆಯು ಕಂಕಣಬದ್ಧವಾಗಿದೆ.
 ಐಕ್ವೆಸ್ಟ್ (iQuest - Institute of Quality Engineering and Software Testing). ಇದೊಂದು ವೃತ್ತಿಪರ, ಅಂದರೆ ಉನ್ನತ ಗುಣಮಟ್ಟದ ಕೌಶಲ್ಯತೆ, ಸರ್ವತೋಮುಖ ವ್ಯಕ್ತಿತ್ವ ವಿಕಸನ ಅಭಿವೃದ್ಧಿ ಹಾಗೂ ಉದ್ಯೋಗಕ್ಕೆ ಅರ್ಹರÀನ್ನಾಗಿಸುವ ತರಬೇತಿ ನೀಡುವ ಸಂಸ್ಥೆ.
 ದೇಶದ ಜನಸಂಖ್ಯೆಯಲ್ಲಿ ಶೇ. 40-50ರಷ್ಟು ಯುವಕ ಯುವತಿಯರ ಪಡೆಯೇ ಇದೆ. ಭಾರತದಲ್ಲಿ ಪ್ರತಿವರ್ಷ ಸಾಮಾನ್ಯ ಪದವಿ ಮುಗಿಸಿ ಹೊರಬರುತ್ತಿರುವವರ ಸಂಖ್ಯೆ 32 ರಿಂದ 35 ಲಕ್ಷ. ಅಂತೆಯೇ ಎಂಜಿನಿಯರಿಂಗ್ ಪದವೀಧರರ ಸಂಖ್ಯೆ 12 ರಿಂದ 15 ಲಕ್ಷ ಎಂದು NASCOM ಮತ್ತು AMCAT ಸಮೀಕ್ಷೆಯಿಂದ ತಿಳಿದುಬಂದಿದೆ. ಇವರಲ್ಲಿ ಸಾಮಾನ್ಯ ಪದವೀಧರರು ಶೇ. 15 ರಿಂದ 20 ಮಾತ್ರ ನೇರ ಉದ್ಯೋಗಕ್ಕೆ ಅರ್ಹರಾಗಿರುತ್ತಾರೆ. ಎಂಜಿನಿಯರಿಂಗ್ ಪದವೀಧರರು ಶೇ.25ರಷ್ಟು ನೇರ ಉದ್ಯೋಗ ದೊರಕಿಸಿಕೊಳ್ಳುವಲ್ಲಿ ಸಫಲರಾಗುತ್ತಾರೆ. ಉಳಿದ ಶೇ.75-80ರಷ್ಟು ಮಂದಿ ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯಗಳ ಕೊರತೆಯಿಂದ ಉದ್ಯೋಗ ವಂಚಿತರಾಗಿದ್ದಾರೆ. ಇಂತಹವರಿಗಾಗಿ ಹಾಗೂ ಕೈಗಾರಿಕೋದ್ಯಮಿಗಳು ಬಯಸುವ ತಂತ್ರಜ್ಞರನ್ನು ಒದಗಿಸುವ ನಿಟ್ಟಿನಲ್ಲಿ ಅಭ್ಯರ್ಥಿಗಳಿಗೆ ಆಂಗ್ಲ ಭಾಷೆಯಲ್ಲಿ ವಿಶೇಷ ಕೌಶಲ್ಯ, ತಾರ್ಕಿಕ ಕೌಶಲ್ಯ, ವ್ಯಕ್ತಿತ್ವ ವಿಕಸನ, ಮಾನಸಿಕ ಹಾಗೂ ಬೌದ್ಧಿಕ ಸಾಮಥ್ರ್ಯ ಹೆಚ್ಚಿಸುವ ದಿಸೆಯಲ್ಲಿ ಈ ತರಬೇತಿಯ ಅವಶ್ಯಕತೆ ಪ್ರಸ್ತುತ ಅತ್ಯಗತ್ಯವಾಗಿದೆ.
 ಉದ್ದೇಶ: ನೇರ ಉದ್ಯೋಗದಿಂದ ವಂಚಿತರಾದ ಬಿಇ, ಬಿ.ಟೆಕ್, ಎಂಇ, ಎಂ.ಟೆಕ್, ಎಂಸಿಎ, ಬಿ.ಎಸ್ಸಿ, ಬಿ.ಕಾಂ, ಬಿಬಿಎಂ, ಬಿಸಿಎ, ಎಂಬಿಎ ಮೊದಲಾದ ಪದವೀಧರರಿಗೆ ಅವರವರ ಅಭಿರುಚಿಗೆ ತಕ್ಕಂತೆ ಆಯಾ ವಿಷಯದಲ್ಲಿ ಕೌಶಲ್ಯ ಬೆಳೆಸುವುದು ಹಾಗೂ ವೃತ್ತಿಪರ ಕುಶಲತೆಗಳನ್ನು ಅಭಿವೃದ್ಧಿ ಪಡಿಸುವುದು. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರು ನೆಲೆ ನಿಲ್ಲುವಂತೆ ಮಾಡುವುದು. ಇದಲ್ಲದೆ ಎಲ್ಲಕ್ಕಿಂತ ಮುಖ್ಯವಾಗಿ 100ಕ್ಕೆ ನೂರು ಉದ್ಯೋಗ ದೊರಕಿಸಿಕೊಡಲು ನೆರವಾಗುವುದು. ಉದ್ಯಮ ಪತಿಗಳನ್ನು ತರಬೇತಿ ಕೇಂದ್ರಕ್ಕೆ ಆಹ್ವಾನಿಸಿ ಅಭ್ಯರ್ಥಿಗಳೊಡನೆ ಮುಖಾಮುಖಿ ಭೇಟಿ ಮಾಡಿಸುವುದು. ಅಲ್ಲದೆ ಉದ್ಯಮಿಗಳ ಅವಶ್ಯಕತೆ ಆಧರಿಸಿ ತರಬೇತಿ ನೀಡುವುದು ಈ ಸಂಸ್ಥೆಯ ಪ್ರಮುಖ ಗುರಿಯಾಗಿದೆ.
 ಈ ಉದ್ದೇಶಗಳ ಸಾಧನೆಯ ಮಾರ್ಗದಲ್ಲಿ ಪ್ರಪ್ರಥಮವಾಗಿ ಇಇಪಿ ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಲಿದೆ. ಇಇಪಿ ಅಂದರೆ (Employability Enhancement Programme) “ಉದ್ಯೋಗಾರ್ಹತೆ ವರ್ಧಕ ತರಬೇತಿ ಕಾರ್ಯಕ್ರಮ.” ತರಬೇತಿ ಅವಧಿ 45 ದಿನಗಳು. ಅಭ್ಯರ್ಥಿಗಳ ಸರ್ವತೋಮುಖ ಬೆಳವಣಿಗೆಯೇ ಈ ಕಾರ್ಯಕ್ರಮದ ಪ್ರಮುಖ ಧ್ಯೇಯ. ಎಲ್ಲ ಕೋನಗಳಲ್ಲಿ ತಾಂತ್ರಿಕ ಕೌಶಲ್ಯ ಬೆಳೆಸುವುದು. ಪರೀಕ್ಷಾ ಕಲ್ಪನೆಗಳು, ಅವುಗಳ ರೀತಿ, ತಿಳಿವಳಿಕೆ, ಆಟೋಮೇಷÀನ್ ಟೂಲ್ಸ್‍ಗಳ ಅರಿವು, ಅಭಿವ್ಯಕ್ತಿ ಕೌಶಲ್ಯ, ಕಂಪ್ಯೂಟರ್ ಜ್ಞಾನ ಹಾಗೂ ಅದರ ನಿರ್ವಹಣೆ. ಕೈಗಾರಿಕೆಗಳ ಅಗತ್ಯತೆಗೆ ಅನುಸಾರವಾಗಿ ಕೌಶಲ್ಯಾಭಿವೃದ್ಧಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯವಹರಿಸಲು ಸನ್ನದ್ಧಗೊಳಿಸುವುದು. ಸಿವಿ ಹಾಗೂ ಸಂದರ್ಶನ ಸಿದ್ಧತೆ ಬಗ್ಗೆ ಮಾಹಿತಿ, ಸಮಸ್ಯೆ ನಿವಾರಣೆಗೆ ತಮ್ಮದೇ ಆದ ಬೌದ್ಧಿಕ ಸಾಮಥ್ರ್ಯದ ಬಳಕೆ. ಸಮೂಹ ಚರ್ಚೆ ಮೂಲಕ ಹೊಸ ಹೊಸ ಅಂಶಗಳ ಆವಿಷ್ಕಾರ. ಉದ್ಯೋಗಾಧಾರಿತ ತರಬೇತಿಯಿಂದ ಸಂಬಂಧಿಸಿದ ಕೌಶಲ ವೃದ್ಧಿಗೊಂಡು ಅತ್ಯುತ್ತಮ ಕಾರ್ಯನಿರ್ವಹಣೆ ಬಲ್ಲವರಾಗುವುದು ನಿಶ್ಚಿತ.
 ನಾಸ್ಕಾಮ್ (NASCOM), ಆಮ್‍ಕ್ಯಾಟ್ (AMCAT) ನಡೆಸುವ ಇಎಟಿ (Employability Assessment Test) ಸುಲಭವಾಗಿ ಎದುರಿಸಬಹುದು. ಈ ಮೂಲಕ ಉದ್ಯೋಗದಾತ ಕಂಪನಿಗಳ ಸಂದರ್ಶನಕ್ಕೆ ನೇರ ಪ್ರವೇಶ ಪಡೆಯಬಹುದು. ಹೀಗಾಗಿ ಐಟಿ ಉದ್ಯಮದಲ್ಲಿ ಸಾಕಷ್ಟು ಅವಕಾಶಗಳನ್ನು ಗಿಟ್ಟಿಸಿಕೊಳ್ಳಬಹುದು. ISTQBಗೆ ಸಿದ್ಧರಾಗಬಹುದು. ಈ ಮೂಲಕ ಸರ್ಟಿಫೈಡ್ ಟೆಸ್ಟ್ ಎಂಜಿನಿಯರ್ ಆಗಬಹುದು.
 ಈ ಸಂಸ್ಥೆಯು ಅಭ್ಯರ್ಥಿಗಳಿಗೆ ಶೇ.100ರಷ್ಟು ಉದ್ಯೋಗ ದೊರಕಿಸಿಕೊಡುವಲ್ಲಿ ನೆರವಾಗುತ್ತದೆ. ಸಂಸ್ಥೆಯ ಸಂಸ್ಥಾಪಕರು ಇತರ ಹಲವು ಉದ್ಯಮಗಳೊಂದಿಗೆ ನಿಕಟ ಸಂಪರ್ಕ ಹೊಂದಿರುವುದರಿಂದ ತರಬೇತಿ ಪಡೆದವರಿಗೆ ಉದ್ಯೋಗದ ಗ್ಯಾರಂಟಿ ಬಹುತೇಕ ಸಿಗಲಿದೆ. ಐಕ್ವೆಸ್ಟ್ ತರಬೇತಿ ಹೊಂದಿದವರಿಗೆ ಇತರೆ ತರಬೇತಿಯ ಅವಶ್ಯಕತೆ ಇರುವುದಿಲ್ಲ. ಉದ್ಯಮಗಳು ಈ ಸಂಸ್ಥೆಯಲ್ಲಿ ತರಬೇತಿ ಪಡೆದವರನ್ನು ಉದ್ಯೋಗಕ್ಕೆ ನೇಮಿಸಿಕೊಂಡಲ್ಲಿ ನಂತರದ ಪುನರ್ ತರಬೇತಿಯ ಅಗತ್ಯತೆಯೂ ಇಲ್ಲ. ಈ ತರಬೇತಿ ಕಾರ್ಯಕ್ರಮ ಕುರಿತು ಉದ್ಯಮಿಗಳು, ಪ್ರಾಂಶುಪಾಲರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಉತ್ತಮ ಪ್ರತಿಕ್ರಿಯೆ ಈಗಾಗಲೇ ವ್ಯಕ್ತವಾಗಿದೆ.
 ಪ್ರಸ್ತುತ ದಿನಗಳಲ್ಲಿ ಐಕ್ವೆಸ್ಟ್‍ನಂತಹ ಸಂಸ್ಥೆಗಳ ಅಗತ್ಯತೆ ಬಹಳ ಅವಶ್ಯಕವಾಗಿದೆ. ಪದವಿ ಜತೆಗೆ ವೃತ್ತಿ ಕೌಶಲವೂ ಸೇರಿದಾಗ ಬೌದ್ಧಿಕ ಸಾಮಥ್ರ್ಯ, ಕೌಶಲ್ಯತೆ ಒಟ್ಟಾಗಿ ಉದ್ದಿಮೆಗಳಲ್ಲಿ ಕೆಲಸಕ್ಕೆ ಸೇರಲು ತುಂಬಾ ಸಹಾಯಕ ಆಗಲಿದೆ. ಭಾರತ ಸರ್ಕಾರವೂ ಕೂಡ ಈ ದಿಸೆಯಲ್ಲಿ ಮುಂದಡಿಯಿಟ್ಟಿದೆ. ವೃತ್ತಿ ಕೌಶಲತೆ ನೀಡುವಲ್ಲಿ ಸರ್ಕಾರದೊಂದಿಗೆ ಸಮಾಜವೂ ಹೆಜ್ಜೆ ಇಡಬೇಕಾದುದು ಇಂದಿನ ಅಗತ್ಯವಾಗಿದೆ.
 ಈ ಸಂಸ್ಥೆಯು ಮೈಸೂರಿನ ಬೃಹತ್ ಉದ್ಯಮಗಳಾದ ಎಲ್ ಅಂಡ್ ಟಿ ಹಾಗೂ ಇನ್‍ಫೋಸಿಸ್ ಸಂಸ್ಥೆಯ ಪಕ್ಕದಲ್ಲಿದೆ. ಸದ್ಯ ಈ ತರಬೇತಿ ಸಂಸ್ಥೆಯು ಸಕಲ ರೀತಿಯಲ್ಲೂ ಸುಸಜ್ಜಿತವಾಗಿದ್ದು ಅಭ್ಯರ್ಥಿಗಳ ಎಲ್ಲ ಅಗತ್ಯತೆಗಳನ್ನು ಪೂರೈಸಲಿದೆ. ತರಬೇತಿಗೆ ಅಗತ್ಯವಾದ ಎಲ್ಲಾ ಸೌಲಭ್ಯಗಳೂ ಇಲ್ಲಿವೆ. ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್, ಸುಸಜ್ಜಿತ ತರಗತಿ ಕೊಠಡಿಗಳು ಮೊದಲಾದ ಸೌಕರ್ಯಗಳೂ ಇಲ್ಲುಂಟು.
 "ಸಮಾಜ ನನಗೆ ಬಹಳಷ್ಟು ನೀಡಿದೆ. ದೇಶ, ವಿದೇಶಗಳಲ್ಲಿ ಸುದೀರ್ಘ ಅನುಭವದೊಂದಿಗೆ ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದು, ದೇಶದ ಕೆಲ ಯುವಕ, ಯುವತಿಯರ ಜ್ಞಾನಾರ್ಜನೆ ವೃದ್ಧಿಗೊಳಿಸಿ ಅವರಿಗೆ ಉದ್ಯೋಗ ದೊರಕಿಸಿ ಕೊಡುವ ಉದ್ದೇಶದಿಂದ ಐಕ್ವೆಸ್ಟ್ ಸಂಸ್ಥೆಯನ್ನು ಪ್ರಾರಂಭಿಸಿದ್ದೇನೆ. ಈ ಮೂಲಕ ಸಮಾಜಕ್ಕೆ ನೆರವಾಗುವ ಅಭಿಲಾಶೆಯಿದೆ."
- ಕೆ.ಎಸ್.ಮಂಜುನಾಥ, ಸಂಸ್ಥಾಪಕ - ಪ್ರಧಾನ ಕಾರ್ಯ ನಿರ್ವಾಹಕರು.